ನಮ್ಮ ನಾಡು ಕರ್ನಾಟಕ ಡಾ.ಎಚ್.ಎಸ್. ಗೋಪಾಲ ರಾವ್ ಬರೆದ ಪುಸ್ತಕ. ಕರ್ನಾಟಕವನ್ನು ಅರಿಯುವುದು ಹೇಗೆ? ಅದರ ಪ್ರಾಕೃತಿಕ ಸಂಪತ್ತು, ಇತಿಹಾಸ ಸಂಪತ್ತು, ಸಾಂಸ್ಕೃತಿಕ ಸಂಪತ್ತು, ಕೈಗಾರಿಕಾ ಸಂಪತ್ತು ಹಾಗೂ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ತಿಳಿಯಲು ಚಿಕ್ಕವರಿಗಾಗಲಿ, ದೊಡ್ಡವರಿಗಾಗಲಿ ಈ ಪುಸ್ತಕ ತುಂಬ ಉಪಯುಕ್ತವಾದದ್ದು.ಇದರಲ್ಲಿ ಸಂಶೋಧನೆಯ ಭಾರವಿಲ್ಲ . ನಮ್ಮ ನಾಡಿನ ಸ್ಥೂಲವಾದ ಆದರೆ ಪ್ರಾತಿನಿಧಿಕವಾದ ಒಂದು ಚಿತ್ರವನ್ನು ನೀಡುತ್ತದೆ. ಕಡೆಯ ಪುಟಗಳಲ್ಲಿ 'ಕರ್ನಾಟಕದ ಕೆಲವು ಮೊದಲುಗಳು' ಉಪಯುಕ್ತ ಮಾಹಿತಿಯಾಗಿದೆ. == ಬಾಹ್ಯ ಸಂಪರ್ಕ == ಡಾ.ಎಚ್.ಎಸ್. ಗೋಪಾಲ ರಾವ್ ಅವರ ಪುಸ್ತಕಗಳು ಡಾ.ಎಚ್.ಎಸ್. ಗೋಪಾಲ ರಾವ್, ಪ್ರಜಾ ವಾಣಿ 2021-08-06 ವೇಬ್ಯಾಕ್ ಮೆಷಿನ್ ನಲ್ಲಿ.